SMART FARMING IDEA | SMART AGRICULTURE | SUCCESSFUL AND INSPIRATIONAL FARMER | ಹಿಪ್ಪುನೇರಳೆ ಕೃಷಿ

2



ಪ್ಲಾಸ್ಟಿಕ್ ನೀರಿನ ಬಾಟಲಿಯಿಂದ ಹನಿ ನೀರಾವರಿ, ತ್ಯಾಜ್ಯ ನೀರಿನಿಂದ ಹಿಪ್ಪುನೇರಳೆ ಕೃಷಿ :

ಮನಸ್ಸಿದ್ದರೆ ಎಂತಹ ಕಠಿಣವಾದ ಕೆಲಸವು ಸಾಧ್ಯ ಎಂಬುದನ್ನು ಬರಪೀಡಿತ ಜಿಲ್ಲೆ ಎಂದೇ ಹೆಸರಾಗಿರುವ ಚಿಕ್ಕಬಳ್ಳಾಪುರದ ಕುಪ್ಪಳ್ಳಿಯ ರೈತ ಮುನಿಯಪ್ಪ ಸಾಧಿಸಿ, ಇತರರಿಗೆ ಮಾದರಿಯಾಗಿದ್ದಾರೆ. ನದಿ-ನಾಲೆಗಳಿಲ್ಲದ, ಒಂದೂವರೆ ಸಾವಿರ ಅಡಿ ಆಳ ಕೊಳವೆಬಾವಿ ಕೊರೆದರು ಇಲ್ಲಿ ನೀರು ಸಿಗುವುದು ಕಷ್ಟ. ಕುಡಿಯುವ ನೀರಿಗೂ ಹಾಹಾಕಾರವಿರುವ ಈ ನೆಲದಲ್ಲಿ ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಛಲ ಬಿಡದೇ ಸಾಧನೆ ಮೆರೆದಿದ್ದಾರೆ ರೈತ ಮುನಿಯಪ್ಪ. ಮನೆಯಲ್ಲಿ ಬಳಸಿದ ನೀರು, ಚರಂಡಿ ಸೇರಲು ಬಿಡದೇ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹಿಪ್ಪುನೆರಳೇ ಸೊಪ್ಪು ಬೆಳೆದು ಯಶಸ್ವಿಯಾಗಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ರೈತ ಮುನಿಯಪ್ಪ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ತಮ್ಮ ಮುಕ್ಕಾಲು ಎಕರೆ ಖುಷ್ಕಿ ಜಮೀನಿನಲ್ಲಿ ಮರಕಡ್ಡಿ ಮೂಲಕ 330 ಹಿಪ್ಪುನೆರಳೆ ಸೊಪ್ಪಿನ ಗಿಡಗಳನ್ನು ಬೆಳೆಸಿದ್ದಾರೆ. ಪ್ರತಿನಿತ್ಯ ಅವರು ಬೆಳಿಗ್ಗೆ ಮತ್ತು ಸಂಜೆ ತಮ್ಮ ದ್ವಿಚಕ್ರವಾಹನದಲ್ಲಿ 20 ಲೀಟರ್, ಬಳಕೆಯಾದ ನೀರನ್ನು ಮನೆಯಿಂದ ತಂದು ಬಾಟಲಿಗೆ ತುಂಬುವುದರಿಂದ ಹಿಪ್ಪುನೆರಳೆಸೊಪ್ಪು, ಮಳೆ ಇಲ್ಲದಿದ್ದರೂ ಸೊಂಪಾಗಿ ಬೆಳೆದುನಿಂತಿದೆ. ಎರಡು-ಮೂರು ತಿಂಗಳಿಗೊಮ್ಮೆ ಹಿಪ್ಪುನೆರಳೆ ಸೊಪ್ಪು ಮಾರಾಟ ಮಾಡಿ, ಪ್ರತಿಬಾರಿ 2 ರಿಂದ 4 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಮೊದಲು ಟ್ಯಾಂಕರ್ ಮೂಲಕ ಹಿಪ್ಪುನೆರಳೆ ಗಿಡಗಳಿಗೆ ನೀರುಣಿಸುತ್ತಿದ್ದೆ, ಆದರೆ ಇದರಿಂದ ನೀರಿಗಾಗಿ ಸಾಕಷ್ಟು ಖರ್ಚಾಗುತ್ತಿತ್ತು. ಇದಕ್ಕೆ ಉಪಾಯ ಕಂಡುಕೊಂಡು, ಕಸದಿಂದ ರಸವೆಂಬಂತೆ ಮನೆಯಲ್ಲಿ ಪಾತ್ರೆ ತೊಳೆದ, ಬಟ್ಟೆ ಒಗೆದು ಬಳಸಿದ ನೀರನ್ನು ವ್ಯರ್ಥ ಮಾಡದೆ ಪ್ಲಾಸಿಕ್ಟ್ ಬಾಟಲಿಗೆ ತುಂಬಿಸಿ, ಹನಿ ಹನಿನೀರನಿಂದ ಹಿಪ್ಪು ನೆರಳೆ ಸೊಪ್ಪು ಬೆಳೆಯುವ ಕಾಯಕಕ್ಕೆ ಮುಂದಾಗಿರುವುದಾಗಿ ರೈತ ಮುನಿಯಪ್ಪ ಹೇಳುತ್ತಾರೆ.
ಎಷ್ಟೇ ಕಷ್ಟ ಬಂದರೂ ಇಷ್ಟ ಪಟ್ಟು ವಿಭಿನ್ನ ಆಲೋಚನೆ ಮಾಡಿ ಕೆಲಸ ಮಾಡಿದರೆ ಪ್ರತಿಫಲ ಸಿಕ್ಕೇಸಿಗುತ್ತದೆ ಎನ್ನುವುದನ್ನು ರೈತ ಮುನಿಯಪ್ಪ ನಿರೂಪಿಸಿದ್ದಾರೆ.

Drip irrigation from plastic water bottles, maple cultivation with waste water:

Muniyappa, a farmer from Kuppallupur in Chikkaballapur district, who is known as a drought-stricken district, has become a role model for others. The river-banks, one and a half thousand feet deep, were drilled and it was difficult to find water here. Farmer Muniyappa said that the land where drinking water is available, will live in agriculture. Successful use of home-made water and sewage, without the use of leeches, has been successful.
Three years ago, farmer Muniyappa planted 330 green greens under the Mahatma Gandhi National Rural Employment Guarantee Scheme on his three-acre Khushki (Rain water land, Dray land) farm. In the morning and evening they brought 20 liters of used water from the house on their bikes and filled them with bottled water. Selling green leaves every two to three months, earning 2 to 4 thousand rupees every time.
At first I was watering the plants by the tanker, but it cost a lot. Farmer Muniyappa says that the idea is to get the garbage from the garbage, wash the clothes, wash the cloth, and fill the plastic bottle without wasting it.
Farmer Muniyappa has stated that no matter how difficult, thinking differently and working differently, you get rewarded.

ಸ್ನೇಹ ಬಂಧುಗಳೇ ನಮಸ್ಕಾರ…

ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು “ಯೂ ಟ್ಯೂಬ್”ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ…ಧನ್ಯವಾದಗಳು.

___ ಚೀಗೋರಾ
#CHEEGORA #smartagriculture #smartfarming #smartideas #smartfarmer #successstorys #inspirationalman #Inspirationalvideos #indianfarmer #Reshme #agriculture #Silkfarming #mulberrycultivation #sericulture #ಹಿಪ್ಪುನೇರಳೆಕೃಷಿ #ರೇಷ್ಮೆಬೆಳೆ #ರೇಷ್ಮೆಕೃಷಿ

2 Comments
  1. Plantation Info says

    Navu kuda Bere method madiddivi

  2. Live Simple says

    Central govt, state govt, NGO's, Charity trust and other social welfare department should help such farmers to overcome from such problem.

Leave A Reply

Your email address will not be published.